ಆಶೀರ್ವಾದ್ ಐಟಿಸಿ ಲಿಮಿಟೆಡ್ ಒಡೆತನದ ಪ್ರಮುಖ ಆಹಾರ ಮತ್ತು ಅಡುಗೆ ಪದಾರ್ಥಗಳ ಬ್ರಾಂಡ್ ಆಗಿದೆ. ಆಶೀರ್ವಾದ್ ಬ್ರಾಂಡ್ ಅನ್ನು 2002 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಅದರ ಉತ್ಪನ್ನಗಳ ಶ್ರೇಣಿಯಲ್ಲಿ ಹಿಟ್ಟು, ಉಪ್ಪು, ಮಸಾಲೆಗಳು, ತ್ವರಿತ ಆಹಾರ ಮಿಶ್ರಣಗಳು, ಡೈರಿ ಉತ್ಪನ್ನಗಳು ಮತ್ತು ಸೂಪರ್‌ಫುಡ್‌ಗಳು ಸೇರಿವೆ. == ಉತ್ಪನ್ನಗಳು == === ಗೋಧಿ ಹಿಟ್ಟು === 2002ರ ಮೇ 26ರಂದು ಬಂಗಾಳ ಮತ್ತು ಚಂಡೀಗಢದಲ್ಲಿ "ಆಶೀರ್ವಾದ್ ಅಟ್ಟಾ" ಬಿಡುಗಡೆಯೊಂದಿಗೆ ಐಟಿಸಿ ಬ್ರಾಂಡೆಡ್ ಅಟ್ಟಾ (ಪ್ಯಾಕೇಜ್ ಮಾಡಿದ ಗೋಧಿ ಹಿಟ್ಟು) ಮಾರುಕಟ್ಟೆಯನ್ನು ಪ್ರವೇಶಿಸಿತು. ಈ ಉತ್ಪನ್ನವು ಈಗ ಭಾರತದಾದ್ಯಂತ ಲಭ್ಯವಿದೆ. ಆಶೀರ್ವಾದ್ ಪ್ಯಾಕೇಜ್ ಪಿಇಟಿ ಪಾಲಿ ಆಗಿದ್ದು, ಭಾರತದ ಗ್ರಾಮೀಣ ಭಾಗದಲ್ಲಿ ಕೈಗೊಳ್ಳುವ ಕೃಷಿ ಪ್ರಕ್ರಿಯೆಯನ್ನು ತೋರಿಸುವ, ಮಧುಬನಿ ವರ್ಣಚಿತ್ರದ ರೂಪದ ವಿನ್ಯಾಸವನ್ನು ಹೊಂದಿದೆ. ಆಶೀರ್ವಾದ್ ಸೆಲೆಕ್ಟ್ ಅಟ್ಟಾವನ್ನು ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಿಂದ ಬರುವ ಶರ್ಬತಿ ಗೋಧಿಯಿಂದ ತಯಾರಿಸಲಾಗುತ್ತದೆ. 2018 ರಲ್ಲಿ 28% ಮತ್ತು ₹೪,೨೦೦ ಕೋಟಿ (ಯುಎಸ್$೯೩೨.೪ ದಶಲಕ್ಷ) ವಹಿವಾಟು ಹೊಂದಿರುವ ಪ್ಯಾಕೇಜ್ಡ್ ಅಟ್ಟಾದಲ್ಲಿ ಆಶೀರ್ವಾದ್ ಬ್ರ್ಯಾಂಡ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿತ್ತು ಎಂದು ಬಿಸಿನೆಸ್ ಲೈನ್ ವರದಿ ಮಾಡಿದೆ. === ಉಪ್ಪು === ಐಟಿಸಿ 26 ಮಾರ್ಚ್ 2003 ರಂದು 'ಆಶೀರ್ವಾದ್ ಸಾಲ್ಟ್' ಬ್ರಾಂಡ್ ಹೆಸರಿನಲ್ಲಿ ಪ್ಯಾಕೇಜ್ಡ್ ಉಪ್ಪನ್ನು ಬಿಡುಗಡೆ ಮಾಡಿತು === ಮಸಾಲೆಗಳು === ಕಂಪನಿಯು ಸಾವಯವ ಆಹಾರಗಳ ಚಿಲ್ಲರೆ ವ್ಯಾಪಾರವನ್ನು ಜುಲೈ 2007 ರಲ್ಲಿ ಪ್ರಾರಂಭಿಸಿತು. ಮೆಣಸಿನಕಾಯಿ, ಅರಿಶಿನ ಮತ್ತು ಕೊತ್ತಂಬರಿ ಪುಡಿಗಳನ್ನು ಒಳಗೊಂಡಿರುವ "ಆಶೀರ್ವಾದ್ ಸೆಲೆಕ್ಟ್" ಸಾವಯವ ಮಸಾಲೆಗಳನ್ನು ಪ್ರಾರಂಭಿಸಿತು. === ತ್ವರಿತ ಆಹಾರ ಮಿಶ್ರಣ(ಇನ್ಸ್ಟಂಟ್ ಫುಡ್ ಮಿಕ್ಸ್) === ಮಾರ್ಚ್ 2006 ರಲ್ಲಿ ಪ್ರಾರಂಭವಾದ ಈ ಶ್ರೇಣಿಯು ಗುಲಾಬ್ ಜಾಮೂನ್, ರವೆ ಇಡ್ಲಿ, ಅಕ್ಕಿ ಇಡ್ಲಿ, ಅಕ್ಕಿ ದೋಸೆ, ಢೋಕ್ಲಾ, ಖಮನ್, ರಸಮಲೈ ಮತ್ತು ವಡೆ ಮಿಶ್ರಣವನ್ನು ಒಳಗೊಂಡಿದೆ. 2021 ರಲ್ಲಿ, ಇದು ಇನ್ಸ್ಟಂಟ್ ಅವಲಕ್ಕಿ, ಉಪ್ಪಿಟ್ಟು, ಸಾಂಬಾರ್ ಮತ್ತು ಸಜ್ಜಿಗೆ ಮಿಶ್ರಣಗಳೊಂದಿಗೆ "ರೆಡಿ-ಟು-ಮಿಕ್ಸ್" ಉಪಹಾರ ವಲಯವನ್ನು ಪ್ರವೇಶಿಸಿತು. === ಬಹುಪಯೋಗಿ ಅಡುಗೆ ಪೇಸ್ಟ್ === 'ಆಶೀರ್ವಾದ್ ಬಹುಪಯೋಗಿ ಅಡುಗೆ ಪೇಸ್ಟ್' , ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯಲ್ಲಿ ಈರುಳ್ಳಿ, ಟೊಮ್ಯಾಟೊ, ಶುಂಠಿ ಮತ್ತು ಬೆಳ್ಳುಳ್ಳಿಯ ಹುರಿದ ಪೇಸ್ಟ್ ಆಗಿದೆ. ಇದು ಹೆಚ್ಚಿನ ಉತ್ತರ ಭಾರತೀಯ ಭಕ್ಷ್ಯಗಳ ತಯಾರಿಕೆಗೆ ಬಳಸುವ ಸಾಮಾನ್ಯ ಪೇಸ್ಟ್ ಆಗಿದೆ. === ಡೈರಿ === ಆಶೀರ್ವಾದ್ 2015 ರಲ್ಲಿ ತುಪ್ಪದ ಬಿಡುಗಡೆಯೊಂದಿಗೆ ಪ್ಯಾಕೇಜ್ಡ್ ಡೈರಿ ವಿಭಾಗವನ್ನು ಪ್ರವೇಶಿಸಿತು. ಡೈರಿ ವಿಭಾಗವು ಹಾಲು, ಮೊಸರು, ಪನೀರ್, ಲಸ್ಸಿ ಮತ್ತು ಮಿಷ್ಟಿ ದೋಯಿಗಳನ್ನು 'ಆಶೀರ್ವಾದ್ ಸ್ವಸ್ತಿ' ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. == ಉತ್ತಮ ಜೀರ್ಣಕಾರಿ ಆರೋಗ್ಯಕ್ಕಾಗಿ ಕ್ರಮ == ಉತ್ತಮ ಜೀರ್ಣಕಾರಿ ಆರೋಗ್ಯದ ಮಹತ್ವದ ಕಡೆಗೆ ಗ್ರಾಹಕರ ಗಮನವನ್ನು ತರಲು ಆಶೀರ್ವಾದ್ ಡಿ. ಕ್ಯೂ. ಪರೀಕ್ಷೆಯನ್ನು ಪ್ರಾರಂಭಿಸಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಆಶೀರ್ವಾದ್ ಅಧಿಕೃತ ಜಾಲತಾಣ ಐಟಿಸಿ ಫುಡ್ಸ್, ಆಶೀರ್ವಾದ್ ಆಶೀರ್ವಾದ್ ಡೈಜೆಸ್ಟಿವ್ ಕೋಶಿಯಂಟ್ ಟೆಸ್ಟ್ ಆಶೀರ್ವಾದ್ ಚಕ್ಕಿ